ಶಾಲೆಯ ಪ್ರಾರಂಭದ ಮೊದಲ ಕಾರ್ಯಕ್ರಮ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ. ಇದನ್ನು 30 /11/2021ರಂದು ಆಚರಿಸಲಾಯಿತು .ಪ್ರಥಮವಾಗಿ ಕಾರ್ಯಕ್ರಮವು ಸ್ವಾಗತ ಭಾಷಣದೊಂದಿಗೆ ಪ್ರೇಮ ನಂದಕುಮಾರ್ ಮಾಡಿದರು . . ಈ ಕಾರ್ಯಕ್ರಮವನ್ನು ನಮ್ಮ ಪ್ರಾಂಶುಪಾಲರಾದ ಡಾ ॥ ವೇದವತಿ ದಿನೇಶ್ ಮತ್ತು ಕಾರ್ಯದರ್ಶಿಗಳಾದ ಶ್ರೀ ದಿನೇಶ್ ರವರು ಕಾರ್ಯಕ್ರಮವನ್ನು ಧ್ವಜಾರೋಹಣ ಹಾಗೂ ತಾಯಿ ಭುವನೇಶ್ವರಿಯ ಪೂಜಿಸುತ್ತಾ, ದೀಪವನ್ನು ಬೆಳಗಿಸಿದರು .ಕುಮಾರಿ ಶ್ರುತಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು.
೧.ದೀಪವು ಮನುಷ್ಯನ ಅಂಧಕಾರವನ್ನು ತೊಡೆದು ಜೀವನವನ್ನು ಬೆಳಕಿನತ್ತ ಸಾಗುವ ರೀತಿಯಲ್ಲಿ ಕನ್ನಡದ ಹಿರಿಮೆಯನ್ನು ಹಚ್ಚೇವು ಕನ್ನಡದ ದೀಪ ಎಂಬ ಹಾಡಿನೊಂದಿಗೆ ನಾಲ್ಕನೆಯ ತರಗತಿಯ ಮಕ್ಕಳು ಭಾವಪೂರ್ಣವಾಗಿ ಹಾಡನ್ನು ಹಾಡಿದರು .
೨.ಒಂದನೆಯ ತರಗತಿಯ ಮಕ್ಕಳು ನಮಗೆಲ್ಲರಿಗೂ ಅ ಆ ಇ ಈ ಯನ್ನು ಕಲಿಸುವ ರೀತಿ ಹೇಗೆ ಹಾಗೂ ಕಲಿಯುವ ರೀತಿ ಹೇಗೆ ಎಂಬುದನ್ನು ತಮ್ಮ ನೃತ್ಯದ ಮೂಲಕ ಎಲ್ಲರ ಮನಸ್ಸನ್ನು ಸೂರೆಗೊಳ್ಳುವಂತೆ ಮಾಡಿದರು .
೩.ಸಮೂಹ ಗಾಯನವನ್ನು 5,6,7,8,9ನೆಯ ತರಗತಿಯ ಮಕ್ಕಳು ಹಾಡಿ ಕರ್ನಾಟಕದ ಇತಿಹಾಸವನ್ನು ನೆನಪಿಸಿದರು .
೪.ಕನ್ನಡ ರಾಜ್ಯೋತ್ಸವ ಕುರಿತಾಗಿ ಕರ್ನಾಟಕ ಹಾಗೂ ಕರ್ನಾಟಕ ಜನತೆಯ ಕನ್ನಡ ರಾಜ್ಯೋತ್ಸವದ ಬಗ್ಗೆ ನಮ್ಮ ಶಾಲೆಯ ಶಿಕ್ಷಕಿ ಸಂಗೀತಾ ಅವರು ಕಿರು ಪರಿಚಯವನ್ನು ಮಾಡಿಕೊಟ್ಟರು .
೫.ನಾಲ್ಕನೇ ತರಗತಿ ಮಕ್ಕಳಿಂದ ಸಮೂಹ ಗಾಯನ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಎಂಬ ಹಾಡು ಎಲ್ಲರ ಹೃದಯವನ್ನು ಸ್ಪರ್ಶಿಸಿತು .
೬.ಕನ್ನಡ ರಾಜ್ಯೋತ್ಸವದ ದಿನದಂದು ನಾವು ಮತ್ತು ನಾಡು ಕಂಡ ಅತ್ಯಂತ ಶ್ರೇಷ್ಠ ಸಾರ್ವಭೌಮ ನಟರಲ್ಲಿ ಸಾರ್ಥಕತೆಯ ನಟರ ಸಾಲಿನಲ್ಲಿ ನಮ್ಮ ಪುನೀತ್ ರಾಜ್ ಕುಮಾರ್ ರವರನ್ನು ಈ ಸಂದರ್ಭದಲ್ಲಿ ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ .ನಮ್ಮ ಶಾಲೆಯ ಪ್ರತಿಯೊಬ್ಬರ ಕಡೆಯಿಂದ ನಮ್ಮ ಶ್ರೀಮಾನ್ ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಪೂರ್ವಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು .
ಪ್ರೇಮಾ ನಂದಕುಮಾರ್ ಅವರಿಂದ ಪುನೀತ್ ರಾಜ್ ಕುಮಾರ್ ರವರಿಗೆ ಅವರದೇ ಆದ ಕವನ
ಅಪ್ಪು ನಾನು ನಿನ್ನ ಅಭಿಮಾನಿಯಲ್ಲ ಅಂದು
ಅಪ್ಪು ನಾನು ನಿನ್ನ ಅಭಿಮಾನಿ ಇಂದು
ಏನು ಮಾಡಿರುವರು ಎಂದು ಅಂದುಕೊಂಡಿದ್ದೆ ಅಂದು
ಅಪ್ಪು ಏನೆಲ್ಲ ಮಾಡಿರುವಿರಿ ಎಂದು ತಿಳಿದುಕೊಂಡೆ ಇಂದು .
ಹೇಳುವ ಮೂಲಕ ಅವರಿಗೆ ನಮನ ಸಲ್ಲಿಸಲಾಯಿತು .
ಪುಟಾಣಿ ಮಕ್ಕಳಾದ ಒಂದನೇ ತರಗತಿಯಿಂದ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಚಂದ್ರ ಮೇಲೆ ಬಂದ ಎನ್ನುವ ಹಾಡನ್ನು ಹಾಡಲಾಯಿತು .ಇದು ಖಂಡಿತವಾಗಿಯೂ ನಮ್ಮ ಅಪ್ಪುವಿನ ಹೃದಯಸ್ಪರ್ಶಿ ಸುತ್ತದೆ ಎಂದು ನಂಬುತ್ತಾ ಕೊನೆಯ ಹಂತದ ಕಾರ್ಯಕ್ರಮವನ್ನು ಮಕ್ಕಳ ದಿನಾಚರಣೆಯ ಪ್ರಯುಕ್ತ ಶಿಕ್ಷಕರು ಮಕ್ಕಳಿಗೋಸ್ಕರ 1ನೃತ್ಯವನ್ನು ಸಂಯೋಜಿಸಿ ಮಾಡಲಾಯಿತು .ಇದರಿಂದ ಪುಟಾಣಿ ಮಕ್ಕಳಿಂದ ಹಿಡಿದು ದೊಡ್ಡ ಮಕ್ಕಳವರೆಗೂ ಬಹಳ ಆನಂದದಿಂದ ಸಂಭ್ರಮಾಚರಣೆಯ ಜೊತೆಗೆ ಪುನೀತ್ ರವರು ಅಗಲಿಕೆ ತುಂಬಲಾಗದ ನಷ್ಟ ಪ್ರತಿಯೊಬ್ಬರಿಗೂ ಅನ್ನುವುದು ಮಾತ್ರ ಸತ್ಯವಾಗಿಯೇ ಉಳಿಯಿತು .
ಕಾರ್ಯಕ್ರಮದ ಯಶಸ್ವಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಾ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಯಿತು .